ಭಾರತೀಯತೆ ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 1.ಪರ್ವತ ಹಿಮಾ ಯಾವ ಎತ್ತರಕ್ಕೆ ಎದ್ದು ನಿಂತಿದೆ?...
ಭಾರತೀಯತೆ
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1.ಪರ್ವತ ಹಿಮಾ ಯಾವ ಎತ್ತರಕ್ಕೆ ಎದ್ದು ನಿಂತಿದೆ? ಪರ್ವತ ಹಿಮ ಆಕಾಶದ ಎತ್ತರಕ್ಕೆ ಎದ್ದು ನಿಂತಿದೆ.
2.ಪೆದ೯ರೆಗಳು ಯಾವುದಕ್ಕೆ ಮುತ್ತು ನೀಡುತ್ತಿವೆ?
ಪೆದ೯ರೆಗಳು ಕರಾವಳಿಗೆ ಮುತ್ತ ನೀಡುತ್ತವೆ
3.ಹಸಿರು ದೀಪವನ್ನು ಎಲ್ಲಿ ಹೆಚ್ಚಾಗಿದೆ?
ಹಸಿರು ದೀಪವನ್ನು ಬಯಲ ತುಂಬ ಹಚ್ಚಲಾಗಿದೆ
4.ಯಂತ್ರೋಷ ಹೇಳುತ್ತಿರುವ ಬಗೆ ಹೇಗೆ?
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಗೋಶವು ಹೇಳುತ್ತಿದೆ
5.ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ಯಾರು?
ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ನಮ್ಮ ಸೈನಿಕರು
6.ನಮ್ಮ ಪಯಣ ಎತ್ತಸಾಗಿದೆ ?
ನಮ್ಮ ಪಯಣ ಗುರಿಯ ಕಡೆಗೆ ಸಾಗಿದೆ
ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
1. ಕಣ್ಣು ಬೇರೆಯಾದರು ನೋಟ ಒಂದಾಗುವ ಸಂದರ್ಭವನ್ನು ತಿಳಿಸಿ.
- ಭಾರತದ ಪ್ರಾಕೃತಿಕ ಸೌಂದರ್ಯವನ್ನು ಕುರಿತು ಹೇಳುತ್ತಾ ಭಾರತದ ಉತ್ತರ ಭಾಗದ ತುದಿಯಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಆಕಾಶದ ಎತ್ತರಕ್ಕೆ ನಿಂತಿವೆ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಕರಾವಳಿಗೆ ಮುತ್ತ ನೀಡುವ ದೊಡ್ಡ ದೊಡ್ಡ ಅಲೆಗಳ ಗಾಯನವಿದೆ ಭಾರತದ ಬಯಲು ಪ್ರದೇಶದಲ್ಲಿ ಸದಾ ಕಾಲ ಹರಿಯುವ ನದಿಗಳು ಕೃಷಿಗೆ ಸಹಾಯಕವಾಗಿ ಹಸಿರು ದೀಪ ಹಚ್ಚಿದಂತೆ ತೋರುತ್ತಿದೆ. ಆಕಾಶದ ನೀಲಿಯಲ್ಲಿ ಹೊಗೆಯನ್ನು ತಲ್ಲುತ್ತಾ ನಿಂತಿರುವ ಬೃಹತ್ ಕೈಗಾರಿಕೆಗಳು ಇದ್ದು ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಕಣ್ಣುಗಳು ಬೇರೆಯಾದರು ನೋಟವು ಒಂದೇ ಎಂದು ಇಲ್ಲಿ ಹೇಳಿದ್ದಾರೆ.
- 2.ಭಾಷೆ ಬೇರೆಯಾದರೂ ಭಾವ ಒಂದು ಸಮರ್ಥಿಸಿ.
- ನಮ್ಮ ದೇಶವನ್ನು ಶತ್ರುಗಳ ದಾಳಿಯಿಂದ ಕಾಪಾಡಲು ಗಡಿ ಭಾಗಗಳಲ್ಲಿ ಭೂಸೇನೆ ಆಕಾಶದಲ್ಲಿ ವಾಯು ಸೇನೆ, ಕಡಲಿನಲ್ಲಿ ನೌಕಾ ಸೇನೆಯ ಸೈನಿಕರು ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಿಡಿದು ನಿಂತಿದ್ದಾರೆ ನಮ್ಮೆಲ್ಲರ ಭಾಷೆಗಳು ಬೇರೆ ಬೇರೆಯಾದರು ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿದೆ ಎಂದು ಕವಿ ಹೇಳಿದ್ದಾರೆ.
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ
1. ನಾವು ಭಾರತೀಯರು ಎಂಬ ಅಭಿಮಾನ ಹಿಡಿಯುವ ಸನ್ನಿವೇಶವನ್ನು ವಿವರಿಸಿ.
ಉತ್ತರ ಭಾರತೀಯತೆ ಕವನದಲ್ಲಿ ಕವಿ ಭಾರತೀಯರ ಏಕತೆಯನ್ನು ಕುರಿತು ಅಭಿಮಾನದಿಂದ ಹೇಳಿದ್ದಾರೆ ಭಾರತ ದೇಶದ ಆಕಾಶದ ಎತ್ತರದ ಪರ್ವತ ಪ್ರದೇಶಗಳಲ್ಲಿ ಕರಾವಳಿಯ ತೀರಗಳಲ್ಲಿ ಬಯಲು ಪ್ರದೇಶಗಳಲ್ಲಿ ಕೋಟ್ಯಾಂತರ ಜನ ಭಾರತೀಯರು ವಾಸಿಸುತ್ತಿದ್ದು ಅವರೆಲ್ಲರ ಕಣ್ಣುಗಳು ಬೇರೆ ಬೇರೆಯಾದರು ನೋಟವು ಒಂದೇ ಆಗಿದೆ. ನಾಡಿನಲ್ಲಿ ಹಲವಾರು ಗಡಿ ಪ್ರದೇಶಗಳು ವಿಸ್ತಾರವಾದ ಬಾನು ಕಡಲುಗಳಿವೆ ಯೋಧರು ನಮ್ಮ ಧ್ವಜವನ್ನ ಅಲ್ಲಿ ಹಾರಿಸುತ್ತಿದ್ದಾರೆ ನಮ್ಮ ತಾಯಿ ಭಾರತಾಂಬೆಯು ನಮ್ಮೆಲ್ಲರನ್ನು ಒಂದೇ ತೊಟ್ಟಿಲಿನಲ್ಲಿ ಕರೆಯುತ್ತಿದ್ದಾಳೆ ಭಾರತೀಯರ ಭಾಷೆಗಳು ಬೇರೆ ಬೇರೆಯಾದರು ಭಾವನೆಗಳು ಒಂದೇ ಆಗಿದೆ ಹಾಗೂ ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿರುವ ಅನೇಕ ಹುತಾತ್ಮರು ನಮ್ಮ ದೇಶದಲ್ಲಿ ಇದ್ದಾರೆ ನಾವು ಕಷ್ಟದಲ್ಲಿದ್ದರೂ ಪರರ ಕಷ್ಟಗಳಿಗೆ ಮಿಡಿಯುವ ಸಂಸ್ಕೃತಿ ನಮ್ಮದಾಗಿದೆ ನವು ಯಾವುದೇ ರಾಜ್ಯದಲ್ಲಿದ್ದರೂ ನಾವು ಒಂದೇ ನಾವೆಲ್ಲರೂ ಭಾರತೀಯರು ಎಂದು ಕವಿ ಅಭಿಮಾನದಿಂದ ಹೇಳಿದ್ದಾರೆ.
ಸಂದರ್ಭದಲ್ಲಿ ಸ್ವಾರಸ್ಯವನ್ನು ಬರೆಯಿರಿ
1. "ಕಣ್ಣು ಬೇರೆ ನೋಟವೂಂದು"
ಪ್ರಸ್ತುತ ವಾಕ್ಯವನ್ನು ಕೆ ಎಸ್ ನರಸಿಂಹಸ್ವಾಮಿಯವರ ನವಫಲ್ಲವ ಕವನ ಸಂಕಲನದಿಂದ ಆಯ್ದ ಭಾರತೀಯತೆ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
ಸಂದರ್ಭ: ಭಾರತ ದೇಶದ ಪರ್ವತ ತಪ್ಪಲು ಪ್ರದೇಶಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ನದಿ ತೀರಗಳಲ್ಲಿ ನೀವೇ ಹೊಗೆ ಕಾರುವ ಯಂತ್ರ ಘೋಷಗಳ ಬಳಿಯಲ್ಲಿ ಈ ಎಲ್ಲಾ ಕಡೆ ವಾಸಿಸುವ ಕೋಟ್ಯಾಂತರ ಜನರ ಕಣ್ಣು ಬೇರೆ ಬೇರೆಯಾದರು ನೋಟವು ಒಂದೇ ಆಗಿದೆ ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಿದ್ದಾರೆ.
ಸ್ವಾರಸ್ಯ: ನಾವೆಲ್ಲರೂ ದೇಶದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ನಾವೆಲ್ಲರೂ ಒಂದೇ.
2. ಭಾಷೆ ಬೇರೆ ಭಾವವೊಂದು.
ಪ್ರಸ್ತುತ ವಾಕ್ಯವನ್ನು ಕೆ ಎಸ್ ನರಸಿಂಹಸ್ವಾಮಿ ಅವರ ನವಫಲವ ಕವನ ಸಂಕಲನದಿಂದ ಆಯ್ದ ಭಾರತೀಯತೆ ಅಂತ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ನಮ್ಮ ನಾಡಿನಲ್ಲಿ ಹಲವಾರು ಗಡಿ ಪ್ರದೇಶಗಳಿದ್ದು ವಿಸ್ತರವಾದ ಬಾನು ಕಡಲುಗಳಿವೆ ನಮ್ಮ ಯೋಧರು ನಮ್ಮ ನಾಡಿನ ಸುವರ್ಣ ಧ್ವಜವನ್ನು ಹೆಚ್ಚಿ ಹಿಡಿದಿದ್ದಾರೆ ನಾವೆಲ್ಲರೂ ವಾಸಿಸುತ್ತಿರುವ ನಮ್ಮ ದೇಶವಾದ ಭಾರತವು ನಮ್ಮೆಲ್ಲರನ್ನು ಪೊರೆದ ತೊಟ್ಟಿಲಾಗಿದೆ ಯುಗ ಯುಗಗಳಲ್ಲಿಯೂ ನಮ್ಮ ಕೊರಳಿನಿಂದ ಐಕ್ಯತೆಯ ಧ್ವನಿ ಮೂಡಿ ಬಂದಿದೆ ಆದ್ದರಿಂದ ನಮ್ಮ ಭಾಷೆಗಳು ಬೇರೆ ಬೇರೆಯಾದರು ಭಾವವು ಒಂದೇ ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.
ಸ್ವಾರಸ್ಯ: ನಮ್ಮ ನಾಡು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ನಾಡಾಗಿದೆ ಎಂಬುದೇ ಇಲ್ಲಿನ ಸ್ವಾರಸ್ಯವಾಗಿದೆ.
3." ಎಲ್ಲೇ ಇರಲಿ ನಾವು ಒಂದು"
ಪ್ರಸ್ತುತ ವಾಕ್ಯವನ್ನು ಕೆ ಎಸ್ ನರಸಿಂಹಸ್ವಾಮಿ ಯವರ ನವಪಲ್ಲವ ಕವನ ಸಂಕಲನದಿಂದ ಆಯ್ದು ಭಾರತೀಯತೆ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ನಮ್ಮಲ್ಲಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿರುವ ಅನೇಕ ಹುತಾತ್ಮರಿದ್ದಾರೆ ನಮ್ಮ ಕಷ್ಟದಲ್ಲಿಯೂ ಪರರಿಗೆ ನಡೆಯುವ ಸಂಸ್ಕೃತಿ ನಮ್ಮದು ಬಿರುಗಾಳಿಯಂತಹ ಕಷ್ಟದಲ್ಲೂ ಕಷ್ಟ ಸಹಿಸಿ ನಮ್ಮ ಗುರಿಗಳಿಗೆ ಸಾಗುವ ಧೀರ ಪ್ರಯಾಣದಲ್ಲಿ ನಾವಿದ್ದೇವೆ. ನಾವು ಯಾವುದೇ ರಾಜ್ಯದಲ್ಲಿದ್ದರೂ ನಾವೆಲ್ಲರೂ ಒಂದೇ ಎಂದು ಕವಿ ಹೇಳುವ ಸಂದರ್ಭದಲ್ಲಿ ವಾಕ್ಯ ಬಂದಿದೆ.
ನಮ್ಮ ದೇಶದ ಯಾವ ಭಾಗದಲ್ಲಿ ವಾಸಿಸಿದರು ನಾವು ಭಾರತೀಯರೆಂಬ ಮನೋಭಾವನೆಯು ಈ ವಾಕ್ಯದಲ್ಲಿಸ್ವಾರಸ್ಯ ಪೂರ್ಣವಾಗಿ ಅಭಿವ್ಯಕ್ತಿಗೊಂಡಿದೆ.
ಉ. ಬಿಟ್ಟ ಸ್ಥಳ ತುಂಬಿರಿ.
1. ಯಂತ್ರಗೋಷ್ ವೇಳುವಲ್ಲಿ
2. ಒಂದೇ ನೆಲದ ತೊಟ್ಟಿಲಲ್ಲಿ
3. ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
4. ಎಲ್ಲೇ ಇರಲಿ ನಾವು ಒಂದು
5. ನಡೆವ ಧೀರ ಪಯಣದಲ್ಲಿ
ತತ್ಸಮ ತದ್ಭವ
1. ಆಕಾಶ- ಆಗಸ
2. ಮೌನ -ಮೋನ
3. ಗಾನ -ಗಾಯನ
4. ಯಂತ್ರ- ಜಂತ್ರ
5. ಯೋಧ- ಜೋಧ
COMMENTS