kseeb solutions for class 9 kannada poem 5 hemanta notes

  ಕೃತಿಕಾರರ ಹೆಸರು : ಎಸ್ . ವಿ . ಪರಮೇಶ್ವರ ಭಟ್ಟರು ಕೃತಿಕಾರರ ಪರಿಚಯ ೧೯೧೪ ರ ಫೆಬ್ರವರಿ ೮ ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಹುಟ್ಟಿದ ಎಸ್ . ವಿ . ಪರಮೇ...

 ಕೃತಿಕಾರರ ಹೆಸರು : ಎಸ್ . ವಿ . ಪರಮೇಶ್ವರ ಭಟ್ಟರು

ಕೃತಿಕಾರರ ಪರಿಚಯ



೧೯೧೪ ರ ಫೆಬ್ರವರಿ ೮ ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಹುಟ್ಟಿದ ಎಸ್ . ವಿ . ಪರಮೇಶ್ವರ ಭಟ್ಟರು ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಕನ್ನಡದ ಹಾಗೂ ಕಾಳಿದಾಸರ ಸಂಸ್ಕೃತ ಕೃತಿಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಭರ್ತೃಹರಿಯ ಶತಕತ್ರಯಗಳನ್ನೂ ಜಯದೇವನ ಗೀತಗೋವಿಂದವನ್ನೂ ಅವರು ಕನ್ನಡಿಸಿದರು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪುರಸ್ಕಾರ ಪಡೆದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯರಾಗಿದ್ದರು . “ ಇಂದ್ರಚಾಪ ” , “ ಸುರಹೊನ್ನೆ ” , “ ಉಪ್ಪುಕಡಲು ” , ” ರಾಗಿಣಿ ” ಮುಂತಾದವು ಅವರ ಕೆಲವು ಮುಖ್ಯ ಕೃತಿಗಳು , “ ಹೇಮಂತ ಕವಿತೆಯನ್ನು ಅವರ “ ಗಗನಚುಕ್ಕಿ ” ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ .

ಆಶಯ ಭಾವ

ಡಾ . ಎಸ್ . ವಿ . ಪರಮೇಶ್ವರ ಭಟ್ಟರು ಕನ್ನಡದ ಬಹುಮುಖ್ಯ ಕವಿ . ಇವರು ಕುವೆಂಪು , ಬೇಂದ್ರೆ , ಪುತಿನ ಮುಂತಾದವರ ಸಮಕಾಲೀನರು . ಅವರೆಲ್ಲರ ಕಾವ್ಯಗಳನ್ನು ಬಹಳ ತೀವ್ರವಾಗಿ ಪ್ರಭಾವಿಸಿದವರು . ಎಸ್ . ವಿ . ಪರಮೇಶ್ವರ ಭಟ್ಟರ ಅನೇಕ ಕವಿತೆಗಳು ಜನಮಾನಸದಲ್ಲಿ ನಿಂತಿವೆ . ಅವರ “ ದೀಪ ಹಚ್ಚಾ * ಎಂಬ ಕವಿತೆಯಂತೂ ಪ್ರತಿ ದೀಪಾವಳಿಯ ಸಮಯದಲ್ಲಿ ಕನ್ನಡಿಗರ ಮನೆಮನಗಳಲ್ಲಿ ನಲಿದಾಡುತ್ತದೆ . “ ಹೇಮಂತ ಕವಿತೆಯಲ್ಲಿ ಪರಮೇಶ್ವರ ಭಟ್ಟರು ಹೇಮಂತ ಋತುವಿನಲ್ಲಿ ಪ್ರಕೃತಿಯಲ್ಲಿ ಕಂಡುಬರುವ ದೃಶ್ಯಗಳನ್ನು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ . ಈ ಸಮಯದಲ್ಲಿ ಉತ್ತರ ಗೋಳಾರ್ಧಕ್ಕೆ ಚಳಿಗಾಲ ,

ಉತ್ತರ ಭಾರತದಲ್ಲಂತೂ ಈ ಸಮಯದಲ್ಲಿ ತೀವ್ರವಾದ ಮಂಜುಬೀಳುವ ಕಾಲ . ಪ್ರಕೃತಿ ಈ ಸಮಯದಲ್ಲಿ ಮೈಮುದುರಿ ಕೂರುತ್ತದೆ . ಹಕ್ಕಿಗಳು ಹಾರಾಟವನ್ನು ಕಡಿಮೆ ಮಾಡುತ್ತವೆ . ವೃಕ್ಷಗಳು ಎಲೆಗಳನ್ನುದುರಿಸಿ ಬೋಳಾಗಿ ನಿಲ್ಲುತ್ತವೆ . ಕಾಡುಪ್ರಾಣಿಗಳಿಗೆ ಆಹಾರ ಸಿಗುವುದು ಕಷ್ಟವಾಗುತ್ತದೆ . ಎಷ್ಟೋ ಪ್ರಾಣಿಗಳು ತಟಸ್ಥಾವಸ್ಥೆಗೆ ಜಾರುತ್ತವೆ . ಹಾಗಾದರೆ ಪ್ರಕೃತಿಗೆ ಹೇಮಂತ ಬೇಡವೆ ? ಹೇಮಂತ ಋತುವನ್ನು ಎದುರುಗೊಳ್ಳುವ ಬಗೆಯೆಂತು ಎಂಬುದನ್ನು ಕವಿ ಈ ಕವಿತೆಯಲ್ಲಿ ಚರ್ಚಿಸುತ್ತಾರೆ . ಹೇಮಂತನ ಈ ಕಠಿಣ ಶಾಸನಕ್ಕೆ ತಲೆಬಾಗುವುದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ ಎಂದು ಕೊನೆಯಲ್ಲಿ ಹೇಳುತ್ತಾರೆ . ಋತುಗಳಿಗೆ ತಕ್ಕಂತೆ , ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪ್ರಕೃತಿಯ ಸಹಜಧರ್ಮ ಎಂಬ ಆಶಯ ಕವಿತೆಯದು . ಈ ಕವಿತೆಯನ್ನು ನಮ್ಮ ಜೀವನಗಳಿಗೂ ನಾವು ಅನ್ವಯಿಸಿಕೊಳ್ಳಬಹುದು . ಮನುಷ್ಯನ ಬದುಕೆಂಬುದು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ . ಕೆಲವೊಮ್ಮೆ ಬಾಳಿನಲ್ಲಿ ಕಷ್ಟನಷ್ಟಗಳು ಬರುತ್ತವೆ . ಮನುಷ್ಯನ ಬದುಕು ತೀವ್ರ ಪರೀಕ್ಷೆಗಳಿಗೊಳಗಾಗುತ್ತದೆ . ಆಗ ಆತ ವಿಧಿಯನ್ನು ಹಳಿಯಬಾರದು . ಬಂದಿರುವ ಕಷ್ಟಗಳನ್ನು ಸೈರಿಸಬೇಕು . ಮುಂದೊಂದು ದಿನ ವಸಂತವು ಬಂದೇ ಬರುವುದೆಂಬ ಭರವಸೆಯಿಂದ ಬಾಳನ್ನು ಬಾಳಬೇಕು . ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾಗಿದ್ದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ , ಹೊಸ ಬಿಸಿಲಿಗೆ ಕಾಯಬೇಕು, ಬಂದೆಲ್ಲ ಕಷ್ಟಸುಖಗಳನ್ನು ನೈಸರ್ಗಿಕ ಎಂದು ಸ್ವೀಕರಿಸಬೇಕು – ಎಂಬ ಭಾವ ಕವಿತೆಯದ್ದಾಗಿದೆ .

9ನೇ ತರಗತಿ ಹೇಮಂತ ಕನ್ನಡ ಪದ್ಯ ನೋಟ್ಸ್ 2022

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೇಗಿರುತ್ತವೆ?

ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೂವಿಲ್ಲದೆ ಹಸುರಿಲ್ಲದೆ ಚಿಗುರೆಲೆಗಳಿಲ್ಲದೆ ಬೋಳಾಗಿರುತ್ತವೆ.

2. ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?

ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ.

3. ಕಾನನದ ಹಕ್ಕಿ ಏನು ಮಾಡುತ್ತಿದೆ?

ಕಾನನದ ಹಕ್ಕಿ ಕಣ್ಣೀರನ್ನು ಸುರಿಸುತ್ತಿದೆ.

4. ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?

ಬಿಳಿಯ ಮಂಜು, ಹಿಮದ ಗಾಳಿ, ನಡುಗುತ್ತಿರುವ ನೀರಸ ಲೋಕ, ಬರಡಾಗಿರುವ ಬನ, ಜಡವಾಗಿರುವ ಜನ ಎತ್ತಲೂ (ಎಲ್ಲಿ ನೋಡಿದರೂ) ಕಾಣುತ್ತಿದ್ದಾರೆ.

5. ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಹೇಗೆ ಹರಿಯುತ್ತಿದೆ?

ಮೆಲ್ಲ ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ವೈ ನೆನೆದು ನಡುಗುತ್ತ ಹೇಮಂತ ಋತುವಿನಲ್ಲಿ ತುಂಗೆಯ ತೊರೆಯ ಹರಿಯುತ್ತಿದೆ.

6. ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?

ಹೇಮಂತನ ಕಠಿಣ ಶಾಸನಕ್ಕೆ ( ಕಾಯ್ದೆಗೆ ) ಎಲ್ಲರೂ ತಲೆಬಾಗಬೇಕು ಎಂದು ಕವಿ ಹೇಳುತ್ತಾರೆ.

7. ಜೀವಗಳ ಧರ್ಮ ಯಾವುದು?

ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯಲ್ಲಿ ಸಂಸ್ಕಾರವನ್ನು ಪಡೆಯುವುದೇ ಜೀವಗಳ ಧರ್ಮವಾಗಿದೆ.

II. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?

ಹೇಮಂತನು ಬಂದಿಳಿದಾಗ ಗಿಡಗಳಲ್ಲಿ ಹೂವಿಲ್ಲ, ಹಸಿರಿಲ್ಲ, ಚಿಗುರೆಲೆಗಳಿಲ್ಲ. ಪ್ರಕೃತಿಯಲ್ಲಿ ದುಂಬಿಗಳ ದನಿ ಇಲ್ಲ. ಹಕ್ಕಿಗಳ ಹಾಡಿಲ್ಲ. ಹೂವಿನ ಪರಿಮಳ ತರುವ ಗಾಳಿ ಇಲ್ಲ.

2. ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?

ಹೊಲಗದ್ದೆಗಳು ಮಂಜಿನ ಮುಸುಕನ್ನು ಹೊದ್ದು ಮಲಗಿವೆ. ನದಿಯು ಮೆಲ್ಲಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ. ಇದು ಹೊಲಗದ್ದೆಗಳ ಮೇಲೆ ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ.

3. ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?

ಹೇಮಂತ ಋತುವಿನಲ್ಲಿ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಮರ ಬೋಳಾಗುತ್ತದೆ. ಮರಗಳಲ್ಲಿ ಹೂವಿಲ್ಲ ಚಿಗುರೆಲೆಗಳಿಲ್ಲ ಹಸಿರು ಇಲ್ಲ. ಮರಗಳ ಸ್ಥಿತಿ ನೋಡಿ ಕಾನನದ ಹಕ್ಕಿ ಕೂಡ ಕಣ್ಣೀರು ಸುರಿಸುತ್ತಿದೆ ಎಂದು ಕವಿ ಮರಗಳ ಸ್ಥಿತಿಯನ್ನು ವರ್ಣಿಸಿದ್ದಾರೆ.

4. ಹೇಮಂತನ ಕಠಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?

ಮನುಷ್ಯನ ಬದುಕು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟ ನಷ್ಟಗಳು ಬರುತ್ತವೆ. ಆದ್ದರಿಂದ ವಿಧಿಯನ್ನು ಹಳಿಯಬಾರದು. ಹೇಮಂತನ ಕಠಿಣ ಶಾಸನವನ್ನು ನೈಸರ್ಗಿಕ, ನಿಸರ್ಗದ ನಿಯಮ ಎಂದು ಸ್ವೀಕರಿಸಬೇಕು. ಹೊಸ ಕಾಲಕ್ಕೆ ಮಾನವ ಕಾಯಬೇಕು.

COMMENTS

Name

9th kannada notes,1,gade,1,prabandha,2,
ltr
item
lbs school: kseeb solutions for class 9 kannada poem 5 hemanta notes
kseeb solutions for class 9 kannada poem 5 hemanta notes
https://blogger.googleusercontent.com/img/b/R29vZ2xl/AVvXsEg7As64aKexqdRXJJeI_4BUWJj7O1ziceS8qWOYYbXc7oYuhUWmxLUCfZmRV_lZuPqgCax-Y0FuYxIrzYP5DJqamj3HsNiUdacqLQAZJgOcBbOHJzj3R4zxbFvIBHYd1DCgAJrOW1oRajJ7cAqmc_1oZUh7wVqrgO8w4LTMtxRLDiU7lRsHkxcAXJE/w400-h219/deja_gau8.jpg
https://blogger.googleusercontent.com/img/b/R29vZ2xl/AVvXsEg7As64aKexqdRXJJeI_4BUWJj7O1ziceS8qWOYYbXc7oYuhUWmxLUCfZmRV_lZuPqgCax-Y0FuYxIrzYP5DJqamj3HsNiUdacqLQAZJgOcBbOHJzj3R4zxbFvIBHYd1DCgAJrOW1oRajJ7cAqmc_1oZUh7wVqrgO8w4LTMtxRLDiU7lRsHkxcAXJE/s72-w400-c-h219/deja_gau8.jpg
lbs school
https://shivutechkannada1.blogspot.com/2022/10/kseeb-solutions-for-class-9-kannada.html
https://shivutechkannada1.blogspot.com/
https://shivutechkannada1.blogspot.com/
https://shivutechkannada1.blogspot.com/2022/10/kseeb-solutions-for-class-9-kannada.html
true
686489652475827663
UTF-8
Loaded All Posts Not found any posts VIEW ALL Readmore Reply Cancel reply Delete By Home PAGES POSTS View All RECOMMENDED FOR YOU LABEL ARCHIVE SEARCH ALL POSTS Not found any post match with your request Back Home Sunday Monday Tuesday Wednesday Thursday Friday Saturday Sun Mon Tue Wed Thu Fri Sat January February March April May June July August September October November December Jan Feb Mar Apr May Jun Jul Aug Sep Oct Nov Dec just now 1 minute ago $$1$$ minutes ago 1 hour ago $$1$$ hours ago Yesterday $$1$$ days ago $$1$$ weeks ago more than 5 weeks ago Followers Follow THIS PREMIUM CONTENT IS LOCKED STEP 1: Share to a social network STEP 2: Click the link on your social network Copy All Code Select All Code All codes were copied to your clipboard Can not copy the codes / texts, please press [CTRL]+[C] (or CMD+C with Mac) to copy Table of Content